ಹಲವು ಜನಾಂಗೀಯ ಸಂಸ್ಕೃತಿಗಳ ಉಳಿವಿಗೆ, ಪೀಠಗಳ ಸ್ಥಾಪನೆಗೆ ಪ್ರೇರಣೆಯಾದ,
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ
ಪ್ರಥಮ ಪೀಠಾಧ್ಯಕ್ಷರಾದ,
ಪ. ಪೂ ಜ ಶ್ರೀ ಬೀರೇಂದ್ರ ಕೇಶವ ತಾರಕಾನಂದ ಪುರಿ ಮಹಾಸ್ವಾಮಿಗಳ
15 ನೇ ಪುಣ್ಯಸ್ಮರಣೆಯ
'ಗುರುವಂದನೆಗಳು'
ಸಹಸ್ರಾರು ವರ್ಷಗಳ ಶ್ರೀ ಮೈಲಾರ, ಶ್ರೀ ಬೀರದೇವ, ಶ್ರೀ ರೇವಣಸಿದ್ದೇಶ್ವರರ "ಸಿದ್ದ- ನಾಥ" ಪರಂಪರೆಯ ಸಮಗ್ರತೆಯನ್ನು ಇಂಬಾಗಿಸಿಕೊಂಡು,
ಇಂದಿನ ಸಾಮಾಜಿಕ ನ್ಯಾಯದ ಸಮಪಾಲು ಸಮಬಾಳು ಬದುಕಿಗೆ ದಿಟ್ಟಧ್ವನಿಯಾದ ಸಮಾಜೋಧಾರ್ಮಿಕ ಸಂತ ಕನಕದಾಸರ ಹೆಸರಲ್ಲಿ ಸ್ಥಾಪನೆಗೊಂಡ ಪೀಠಕ್ಕೆ ನಾಡಿನಲ್ಲಿ ಗೌರವ ತಂದುಕೊಟ್ಟು ಶಿವೈಕ್ಯರಾದ
ಪ ಪೂ ಜ ಬೀರೇಂದ್ರ ಕೇಶವ ತಾರಕಾನಂದ ಪುರಿ ಮಹಾಸ್ವಾಮಿಗಳ
ತ್ಯಾಗ ಜೀವನಕ್ಕೆ,
ಸೇವಾ ಜೀವನಕ್ಕೆ
ನಿಷ್ಪಕ್ಷಪಾತ, ನ್ಯಾಯನಿಷ್ಟೂರಿ ಜೀವನಕ್ಕೆ
ಆಧ್ಯತ್ಮ ಜೀವನಕ್ಕೆ
ಸಮಸ್ತ ಕನಕಪೀಠದ ಭಕ್ತಾದಿಗಳ ಪರವಾಗಿ ಅನಂತ ಅನಂತ ವಂದನೆಗಳು.
ಕುರುಬ ಸಂಘದ ನೇತೃತ್ವದಲ್ಲಿ, ಬೆಂಗಳೂರಿನ ಶ್ರೀನಿವಾಸ ನಗರದ ಶ್ರೀಮಠದಲ್ಲಿ ದಿನಾಂಕ 06-07-2021 ರಂದು ಬೆಳಿಗ್ಗೆ 10:30 ಕ್ಕೆ, ಪೂಜ್ಯರ ಮೂರ್ತಿಯನ್ನು ಸ್ಥಾಪಿಸಿ ಸ್ಮರಣೋತ್ಸವ ಮಾಡಲಾಗುತ್ತಿದೆ,
ಬೆಂಗಳೂರಿನ ಬಂದುಗಳು ಬಿಡುವು ಮಾಡಿಕೊಂಡು ಪೂಜ್ಯರಿಗೆ ನಮಿಸಿ ಕೃತಜ್ಞತೆ ಸಲ್ಲಿಸುವುದು.
-- ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳು
ಕನಕ ಗುರುಪೀಠ, ತಿಂಥಣಿಬ್ರಿಜ್.
0 Comments
Post a Comment