ಕುರುಬ ಜಯಂತಿ(ಚೈತ್ರ ಶುಕ್ಲ ಅಷ್ಟಮಿ=ಏಪ್ರಿಲ್ 1)
ಕುರುಬ ಬಗ್ಗೆ




            'ಕುರುಬ' ಪದವು ಜಾತಿ ಸೂಚಕವಲ್ಲ ಎಂಬುದಕ್ಕೆ ಕುರುಬ ಜಯಂತಿಯೇ ನಿದರ್ಶನ. ಪಂಚಾಂಗಗಳ ಪ್ರಾರಂಭದಿಂದಲೂ, ಯಾವುದೇ ಜಯಂತಿಯ ಬಳಕೆಗೆ ಮೊದಲು ಜಾರಿಯಲ್ಲಿದ್ದ ಏಕೈಕ ಜಯಂತಿ ಕುರುಬ ಜಯಂತಿ. 'ಕುರುಬ' ಎಂಬುದು ಜ್ಞಾನಿಗಳಿಗೆ ಸತ್ಯವಂತರಿಗೆ ಬಳಸುತ್ತಿದ್ದ ಪದ. 
     ಗುರು(ಆರ್ಯ ಸಂಸ್ಕೃತ)=ಕುರುಬ(ಪ್ರಾಕೃತದ್ರಾವಿಡ).
ಇಂದಿಗೂ ದಕ್ಷಿಣ ಭಾರತದಾದ್ಯಂತ,
'ಕುರುಬನ ಬೋಣಿಗೆ'
 'ಕುರುಬನ ಕರೆದು ಪೂಜೆ ಮಾಡಿಸು', 
'ಕುರುಬನ ಕೂರಿಗೆ(ಹೊಲ ಹೂಳುವ ಸಾಧನ) ಮುಂದಾಗಬೇಕು'. ...
"ಬರಗಾಲ ಬಂದರೆ ಕುರುಬನನ್ನು ಬೆಟ್ಟ ಹತ್ತಿಸು". 
ಇಂಥ ಬಳಕೆಯ 'ಕುರುಬ' ಪದದ ಹಿಂದೆ ಪವಿತ್ರ ಮಾನವ, ಯೋಗಿ, ಪೂಜ್ಯ ಎಂಬ ಅರ್ಥವಿದೆ.




ಜಗತ್ತಿನ ಎಲ್ಲ ಜ್ಞಾನಿಗಳನ್ನು ಸ್ಮರಿಸುವ ದಿನವಾಗಿ 'ಕುರುಬ ಜಯಂತಿ' ಅನ್ನು ಆರ್ಯ ಪೂರ್ವ ಭಾರತೀಯರು ಆಚರಿಸುತ್ತಿದ್ದರು.
ಬುದ್ದನ ಪ್ರಭಾವ ಮತ್ತು ಆರ್ಯರ ವ್ಯಾಸ ಪ್ರಭಾವದಿಂದ 'ಕುರುಬ ಜಯಂತಿ' ಪ್ರಾಶಸ್ತ್ಯ ಕಳೆದುಕೊಂಡು, ವ್ಯಾಸಪೂರ್ಣಿಮೆ, ಗುರುಪೂರ್ಣಿಮೆ ಬಳಕೆಗೆ ಬಂದು ಆಚರಣೆಯಾಗುತ್ತಿದೆ.

ಒಂದನೇ ಶತಮಾನದ ಕ್ರಿಸ್ತನು ' ನಾನು ಒಬ್ಬ ಒಳ್ಳೆಯ ಕುರುಬ' (I AM A GOOD SHEPHERD) ಎಂದಿದ್ದಾನೆಯೇ ಹೊರತು ನಾನೊಬ್ಬ ಒಳ್ಳೆಯ ಕ್ರಿಶ್ಚಿಯನ್ ಅಂದಿಲ್ಲ.
'ಕುರುಬ ಶಾಂತಿಯ ಪ್ರತೀಕ'(Shepherd is the symbol of peace) ಎಂಬ ಜಗದ್ವಿಖ್ಯಾತ ನಾಣ್ಣುಡಿ ಕುರುಬ ಎಂದರೆ ಜ್ಞಾನಿ ಎಂಬುದನ್ನು ಸಾರುತ್ತದೆ.
 "ಕುರುಬ-ರ' ಜಯಂತಿ ಎಂದಿಲ್ಲದಿರುವುದೂ ಸಹ, ಕುರುಬ ಪದವು ಸಮೂಹ ವಾಚಕವಲ್ಲ. ಅದೊಂದು ವಿಶೇಣ ಪದ ಎಂಬುದನ್ನು ತೋರಿಸುತ್ತದೆ. 
ಹನ್ನೆರಡನೇ ಶತಮಾನದ ಅಲ್ಲಮನು " 'ಕುರುಬ' ಹುಟ್ಟುವ ಮುನ್ನ ಕುಲವಿಲ್ಲ ಗೋತ್ರವಿಲ್ಲ. ಕುರುಬನ ನೆಲೆ ಕಾಣೋ ಬಸವಣ್ಣ" ಎಂದು ಬಸವಣ್ಣನವರಿಗೆ ಕುರುಬ ಅರ್ಥವನ್ನು ವ್ಯಾಖ್ಯಾನಿಸಿದ್ದಾರೆ. ಅಂದರೆ, 'ಕುರುಬ' ಆಗಬೇಕಾದರೆ ಜಾತಿ ಮತ್ತು ಗೋತ್ರ ಭಾವನೆಯನ್ನು ಅಳಿದಿರಬೇಕು ಎಂಬ ಭಾವ ಅಲ್ಲಮನ ವಾದವಾಗಿದೆ. 
ಇಂದಿನ ಆಧುನಿಕ ಕವಿ ಜ್ಞಾನ ಪೀಠ ಪುರಸ್ಕೃತ ಶ್ರೀ ಚಂದ್ರಶೇಖರ ಕಂಬಾರರು ' ಹೇ ಕುರುಬರಣ್ಣ ಸತ್ಯುಳ್ಳ ಶರಣ ಕಾಪಾಡು ಕುರಿಗಳನ್ನ , ಮಾಡುವೆ ನಮನ.......' ಎನ್ನುತ್ತಾ 'ಕುರುಬ' ಎಂದರೆ ಜಗತ್ರಕ್ಷಕ ಎಂದೂ, ಕುರಿಗಳೆಂದರೆ ಮಾನವರು(ಜೀವಿಗಳು) ಎಂದೂ ಅರ್ಥೈಸಿ ಕವನ ಬರೆದಿರುತ್ತಾರೆ.

'ಕುರು' ಎಂದರೆ ಎತ್ತರ ಎಂದು. ಅಂದರೆ ಎತ್ತರದ ವ್ಯಕ್ತಿತ್ವ ಹೊಂದಿದವನು. 
ಕುರು ಅಂದರೆ ಬೆಟ್ಟ, ಪರ್ವತ, ಮಲೆ ಅಂತಲೂ ಇದೆ. ಬೆಟ್ಟ=ಪರ್ವತ= ಮಲೆ ಒಡೆಯ ಮಲ್ಲಯ್ಯ, ಶಿವ, ಎಂತಲೂ ಸಂಶೋಧಕರು ವ್ಯಾಖ್ಯಾನಿಸಿದ್ದಾರೆ. ಹಾಗಾಗಿ ಕುರುಬ ಎಂದರೆ ದೇವರೆಂತಲೂ, ಆ ದೇವರ ಸತ್ಯವನ್ನು ಪಡೆದ ಮಾನವನಿಗೆ ಕುರುಬ ಎಂತಲೂ ಆಗುತ್ತದೆ.




 ಒಂದು ಕಾಲದ ಪದದ ಅರ್ಥವು ಮತ್ತೊಂದು ಕಾಲಕ್ಕೆ ಅನ್ಯ ಅರ್ಥವನ್ನು ಪಡೆದುಕೊಳ್ಳುತ್ತದೆ ಎಂಬುದ ಭಾಷಾ ಶಾಸ್ತ್ರಜ್ಞರ ವಾದವಾಗಿದೆ. ಉದಾಹರಣೆಗೆ, ಅಕ್ಕ ಎಂಬ ಪದ ಹನ್ನೊಂದನೇ ಶತಮಾನದಲ್ಲಿ ಅಮ್ಮ ಅರ್ಥ ಸೂಚಕವಾಗಿದ್ದರೆ ಇಂದು ಸಹೋದರಿ ಅರ್ಥದಲ್ಲಿ ಬಳಸಲಾಗುತ್ತಿದೆ. ಸ್ವಾರ್ಥಾಪೇಕ್ಷೆಯಿಲ್ಲದ ಜ್ಞಾನಿಗಳು ಸ್ವಾರ್ಥಾಪೇಕ್ಷೆಯಿಲ್ಲದ ಜನರಿಗೆ ಹಾರೈಕೆಯಾಗಿ ಬಳುಸುತ್ತಿದ್ದ 'ಆಶೀರ್ವಾದ'‌

                       ಧನ್ಯವಾದಗಳು