ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಸ್ಥಾಪನೆಯಾದಾಗ ಮುಸ್ಲಿಮರು ಪಲ್ಲಕ್ಕಿಯಲ್ಲಿ ಪೀಠದ ಪ್ರಥಮ ಪೀಠಾಧಿಪತಿಗಳು ಶ್ರೀಗಳ ಮೆರವಣಿಗೆ ಮಾಡಿ ಕಾಗಿನೆಲೆ ಮಠ ಜಾತಿ ಧರ್ಮಗಳ ಮೀರಿದ ಮಠ ಎಂಬುದು ಸಂದೇಶ ಸಾರಿದ್ದರು.

ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಶ್ರೀ ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಮಹಾಸ್ವಾಮಿಗಳು


         ಆ ಮೂಲಮಂತ್ರದೊಂದಿಗೆ ಕಟ್ಟ ಕಡೆಯ ವ್ಯಕ್ತಿಯ ನೊಂದವರ ಪರ ಕೆಲಸ ಮಾಡುತ್ತ ಸಮುದಾಯದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಯ ಶಾಖೆ ಆರಂಭಿಸಿರುವ ನಿರಂಜನಾನಂದ ಪುರಿ ಶ್ರೀಗಳಿಗೆ ಅನಂತ ಕೋಟಿ ನಮನಗಳು.

ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಂದಪುರಿ ಮಹಾಸ್ವಾಮಿಗಳು
             
            ಫೆಬ್ರವರಿ 8 1992 ರಂದು ಸ್ಥಾಪನೆಯಾದ ಶ್ರೀಮಠಕ್ಕೆ ಇಂದಿಗೆ ಅಂದರೆ ಫೆಬ್ರವರಿ 8 2021ಕ್ಕೆಕೆ ಸುದೀರ್ಘ 29 ವರ್ಷ ಕಳೆದಿದೆ. ಸುದೀರ್ಘ 29 ವರ್ಷಗಳಲ್ಲಿ ಕನಕ ಗುರುಪೀಠ ಮಾಡುತ್ತ ಬಂದಿರುವ ಕೆಲಸಗಳ ಪರಿ ನೋಡಿದರೆ ಕುರುಬ ಸಮುದಾಯವು ಕನಕಗುರುಪೀಠದ ಅತ್ಯಂಯಂತ ಬಲಶಾಲಿ ಬೆಳೆಯಲು ಕಾರಣವೆಂದರೆ ತಪ್ಪಾಗಲಾರದು. ಕನಕಗುರುಪೀಠ ಕುರುಬ ಸಮುದಾಯದ ಹಾಗೂ ಹೋಗು ಗಳಿಗಾಗಿ ಹಾಗೂ ಕುರುಬ ಸಮುದಾಯದ ಸಾಂಪ್ರದಾಯಿಕ ಹಬ್ಬಗಳನ್ನು, ಆಚರಣೆಗಳನ್ನು ಮಾಡುತ್ತಾ ಅವುಗಳನ್ನು ಮುಂದಿನ ಪೀಳಿಗೆಗಳಿಗೆ ತಿಳಿಸಲು ಸಹಾಯಕವಾಗಿದೆ.


ಕಾಗಿನೆಲೆ ಕನಕ ಗುರುಪೀಠಕ್ಕೆ ಜಯವಾಗಲಿ.