ಕಳೆದ 20 ದಿನಗಳಿಂದ ನಡೆದ ಪಾದಯಾತ್ರೆಯ ಅಂತಿಮ ಹಂತವಾಗಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನಲ್ಲಿ ಇಂದು ನಡೆದ ಸಮಾವೇಶ ಕುರುಬ ಸಮುದಾಯದ ಹಕ್ಕೊತ್ತಾಯಕ್ಕೆ ಸಾಕ್ಷಿ ಆಯಿತು.
ಎಸ್‍ಟಿ ಮೀಸಲಾತಿ ಸ್ಥಾನಮಾನಕ್ಕಾಗಿ ಆಗ್ರಹಿಸಿ ಕುರುಬ ಸಮುದಾಯದ ಬೃಹತ್ ಸಮಾವೇಶ ನಡೆಯಿತು. ಬೆಂಗಳೂರು ಹೊರವಲಯ ನೆಲಮಂಗಲದ ಮಾದವಾರ ಬಳಿಯ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಮೈದಾನದಲ್ಲಿ ಸಮಾವೇಶ ಅದ್ದೂರಿಯಾಗಿ ನಡೆಯಿತು. ಬೆಳಗ್ಗೆ 11 ಗಂಟೆಗೆ ಸಮಾವೇಶಕ್ಕೆ ಚಾಲನೆಯನ್ನು ನೀಡಲಾಯಿತು, ಕನಕ ಪೀಠದ ಶ್ರೀ ನಿರಂಜನಂದಪುರಿ ಮಹಾಸ್ವಾಮಿಗಳು, ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು, ಕುರುಬ ಸಮುದಾಯದ ಸಚಿವರು, ಜನಪ್ರತಿನಿಧಿಗಳು ಭಾಗಿಯಾಗಿದ್ದರು. ಈ ಮೂಲಕ ಮೀಸಲಾತಿ ಹಕ್ಕೋತ್ತಾಯದ ಜೊತೆಗೆ ಕುರುಬ ಸಮುದಾಯದ ಬಲಪ್ರದರ್ಶನವನ್ನು ಇಡೀ ಕರ್ನಾಟಕದ ಜನತೆಗೆ ಮತ್ತು ಸರ್ಕಾರಕ್ಕೆ ತೋರ್ಪಡಿಸಲಾಯಿತು.
ಇಂದು ನಡೆದ ಈ ಕುರುಬರ ಸಮಾವೇಶ ಇತಿಹಾಸ ಪುಟದಲ್ಲಿ ಸೇರಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪನವರು ತಿಳಿಸಿದರು. ಈ ವೇಳೆ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆಮೂಲೆಯಿಂದ ಕುರುಬ ಸಮಾಜದ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಜನರು ಸೇರಿದ್ದರು.
ಈ ವೇಳೆ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀ ಶ್ರೀ ಶ್ರೀ ನಿರಂಜನಂದಪುರಿ ಮಹಾಸ್ವಾಮಿಗಳು ಮಾತನಾಡಿ ಈಗಾಗಲೇ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಮಾತ್ರ ಎಸ್ ಟಿ ಮೀಸಲಾತಿಯು ಸೀಮಿತವಾಗಿದೆ. ಅದನ್ನು ಅಖಂಡ ಕರ್ನಾಟಕಕ್ಕೆ ನೀಡಬೇಕೆಂದು ಆಗ್ರಹಿಸಿ ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಶ್ರೀಗಳು ತಿಳಿಸಿದರು. ವಿಶೇಷವಾಗಿ ಶ್ರೀಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಹಿಂದಿಯಲ್ಲಿ ಮಾತನಾಡುವುದರ ಮೂಲಕ ನೀವು ನಮ್ಮನ್ನು ಎಸ್ಪಿ ಮೀಸಲಾತಿಗೆ ಸೇರಿಸಬೇಕೆಂದು ಮನವಿ ಮಾಡಿದರು. ಒಂದು ವೇಳೆ ಈ ಹೋರಾಟದ ನಂತರವೂ ನೀವು ನಮ್ಮನ್ನು ಎಸ್ಟಿಗೆ ಸೇರಿಸದಿದ್ದರೆ ನಾವು ಇದಕ್ಕಿಂತ ದೊಡ್ಡಮಟ್ಟದಲ್ಲಿ ಹೋರಾಟವನ್ನು ಮಾಡುತ್ತೇವೆ ಆದಷ್ಟು ಬೇಗನೆ ನೀವು ನಮ್ಮನ್ನು ಸೇರಿಸಬೇಕೆಂದು ಕೇಳಿಕೊಳ್ಳುತ್ತೇವೆ.
ಶ್ರೀ ನಿರಂಜನಂದಪುರಿ ಮಹಾಸ್ವಾಮಿಗಳು ಇನ್ನೂ ಮುಂದುವರೆದು ಮಾತನಾಡಿದರು, ಕುರುಬ ಸಮುದಾಯವನ್ನು ಸ್ವತಂತ್ರ ಪೂರ್ವದಲ್ಲಿ ಎಸ್ಟಿಗೆ ಸೇರಿಸಲಾಗಿತ್ತು ಆದರೆ ಅದು ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ, ಅದನ್ನು ನಾವು ನಮ್ಮ ಹಕ್ಕನ್ನು ಕೇಳಿದರೆ ಸರಕಾರವು ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ. ಸರಕಾರವು ನಾವು ಸತತವಾಗಿ 21 ದಿನಗಳ ಕಾಲ ಪಾದಯಾತ್ರೆಯನ್ನು ಮಾಡಿದರು ಕೂಡ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ. ಕುಲಶಾಸ್ತ್ರದ ಅಧ್ಯಯನದ ಪ್ರಕಾರ ನಮ್ಮ ಸಮುದಾಯವು ಬುಡಕಟ್ಟು ಜನಾಂಗಗಳಿಂದ ಕೂಡಿದ್ದರಿಂದ ನಾವು ಕೇಳಿಕೊಳ್ಳುವುದಿಷ್ಟೆ ನಮಗೆ ಎಸ್ಟಿ ಮೀಸಲಾತಿಯನ್ನು ನೀಡಬೇಕು. ಮುಂದಿನ ಕಟ್ಟಕಡೆಯ ಕುರುಬ ಸಮುದಾಯವು ಎಸ್ಟಿ ಮೀಸಲಾತಿಗೆ ಒಳಪಟ್ಟು ಆರ್ಥಿಕವಾಗಿ ಸುಂದರವಾಲೆಂದು ನಾವು ಕೇಳಿಕೊಳ್ಳುತ್ತೇವೆ.
ಈ ಕಾರ್ಯಕ್ರಮದ ವೇಳೆ ಕುರುಬ ಸಮುದಾಯದ ಮಠದ ಪೀಠಾಧಿಪತಿಗಳಾದ ಶ್ರೀ ನಿರಂಜನಂದಪುರಿ ಮಹಾಸ್ವಾಮಿಗಳು ಕನಕಗುರುಪೀಠ ಹಾಗೂ ರೇವಣಸಿದ್ದೇಶ್ವವರಪೀಠ ಕಾಗಿನೆಲೆ, ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು ಕನಕ ಗುರುಪೀಠ ಹೊಸದುರ್ಗ, ಶ್ರೀ ಸಿದ್ದರಾಮನಂದಪುರಿ ಮಹಾಸ್ವಾಮಿಗಳು ಕನಕಗುರುಪೀಠ ತಿಂತಣಿ ಬ್ರಿಡ್ಜ್, ಶ್ರೀ ಬಸವರಾಜ ದೇವರು ರೇವಣಸಿದ್ಧೇಶ್ವರ ಮಹಾಮಠ ಮನಸೂರು-ಧಾರವಾಡ, ಶ್ರೀ ಮಾಳಿಂಗರಾಯ ಮಹಾರಾಯರು ಹುಲಿಜಂತಿ ಹಾಗೂ ಶ್ರೀ ಅಮರೇಶ್ವರ ಸ್ವಾಮೀಜಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದರ ಜೊತೆಗೆ ಕುರುಬ ಸಮುದಾಯದ ಅನೇಕ ರಾಜಕೀಯ ಮುಖಂಡರುಗಳು ಸಚಿವರು ಶಾಸಕರು ಹಾಗೂ ಮುಖ್ಯವಾಗಿ ಹತ್ತು ಲಕ್ಷಕ್ಕೂ ಅಧಿಕ ಕುರುಬ ಸಮುದಾಯದ ಜನರು ಸೇರಿದ್ದರು.
0 Comments
Post a Comment