ಕನಕದಾಸರ ದೇವಸ್ಥಾನವನ್ನು 21/01/2001 ರಲ್ಲಿ ನಿರ್ಮಾಣ ಮಾಡಲಾಗಿದೆ. ಈ ದೇವಸ್ಥಾನವು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಾದಿಮನಾಳ ಗ್ರಾಮದಲ್ಲಿ ನಿರ್ಮಿಸಲಾಗಿದೆ. ಪ್ರತಿ ವರ್ಷವೂ ಕೂಡ ಬಾದಿಮನಾಳ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಜಾತ್ರೆಯನ್ನು ಆಚರಿಸುತ್ತಾರೆ. ಈ ದೇವಸ್ಥಾನದ ಪೀಠಾಧಿಪತಿಗಳಾಗಿ ಶ್ರೀ ಶ್ರೀ ಶ್ರೀ ಶಿವಸಿದ್ಧೇಶ್ವರ ಮಹಾಸ್ವಾಮಿಗಳನ್ನು ನೇಮಿಸಲಾಗಿದೆ.
ಶ್ರೀಯುತ ಶಂಕ್ರಪ್ಪ ಡೊಳ್ಳಿನ ಇವರ ಸಮ್ಮುಖದಲ್ಲಿ
ಸತತವಾಗಿ 23 ವರ್ಷಗಳ ಕಾಲ ಮುಂಜಾನೆ ಮತ್ತು ಸಂಜೆಯ ವೇಳೆಯಲ್ಲಿ ಅರ್ಚನೆ (ಪೂಜೆ) ನಡೆಯುತ್ತಿದೆ.
ದೇವಸ್ಥಾನದ ಇತಿಹಾಸ:
ದೇವಸ್ಥಾನದ ನಿರ್ಮಾಣಕ್ಕಾಗಿ ಅಡಿಪಾಯದ ಜಾಗವನ್ನು ಸೂಚಿಸಿದವರು ಶ್ರೀ ಶ್ರೀ ಶ್ರೀ ಬಸವರಾಜ ದೇವರು ರೇವಣಸಿದ್ಧೇಶ್ವರ ಮಹಾಮಠ ಮನಸೂರು - ಧಾರವಾಡ
ಹಾಗೂ ಶ್ರೀ ಮಾಳಿಂಗರಾಯ ಡೊಳ್ಳಿನ ಅವರು ಜೊತೆಗೂಡಿ ಶ್ರೀ ಕನಕದಾಸರ ದೇವಸ್ಥಾನವನ್ನು ಸುಮಾರು 25 ವರ್ಷಗಳ ಹಿಂದೆ ಕಟ್ಟಿಸಲು ಊರಿನ ಹಿರಿಯರು ಅಡಿಪಾಯವನ್ನು ಹಾಕುತ್ತಾರೆ. ಗ್ರಾಮದ ಎಲ್ಲ ಹಿರಿಯರೂ ಒಗ್ಗಟ್ಟಾಗಿ ನಿಂತು ತಮ್ಮ ವೈಯಕ್ತಿಕ ಕೆಲಸವನ್ನು ಬದಿಗಿಟ್ಟು ದೇವಸ್ಥಾನದ ನಿರ್ಮಾಣಕ್ಕಾಗಿ ಹಗಲಿರುಳು ಎನ್ನದೇ ಶ್ರಮಿಸುತ್ತಾರೆ. ಅವರ ಕೆಲಸದ ಪ್ರತಿ ಫಲವಾಗಿ ದೇವಸ್ಥಾನದ ಕಟ್ಟಡವು ನಿರ್ಮಾಣವಾಗುತ್ತದೆ.
ಶ್ರೀಯುತ ಹನುಮಪ್ಪ ಗಟ್ಟಿಯವರು ದೇವಸ್ಥಾನದ ನಿರ್ಮಾಣಕ್ಕಾಗಿ ತಮ್ಮ ಹೊಲವನ್ನೇ (ಭೂಮಿ) ದಾನವಾಗಿ ನೀಡಿದರು.
ದೇವಸ್ಥಾನದ ನಿರ್ಮಾಣಕ್ಕಾಗಿ ಶ್ರಮಿಸಿದ ಹಿರಿಯರಲ್ಲಿ ಪ್ರಮುಖರು........ ರಾಮಪ್ಪ ವಾಲಿಕಾರ, ಲಕ್ಷ್ಮಪ್ಪ ಪರಸಾಪೂರ, ಸಂಗಪ್ಪ ಪರಸಾಪೂರ, ಮಲ್ಲಪ್ಪ ಬ್ಯಾಳಿ, ಕಳಕಪ್ಪ ಕ್ಯಾದಿಗುಂಪಿ, ರಾಮಣ್ಣ ಅಳ್ಳೊಳ್ಳಿ, ಯಲ್ಲಪ್ಪ ಪರಸಾಪೂರ, ಆನಂದಪ್ಪ ದಮ್ಮೂರ, ಕಲ್ಲಪ ಕಟ್ಟಿಮನಿ, ಹೊಳಿಯಪ್ಪ ಕುರಿ, ಶರಣಪ್ಪ ಗಟ್ಟಿ, ಚಂದಪ್ಪ ಪರಮನಹಟ್ಟಿ .............. ಅವರಿವರೆನ್ನದೇ ಊರಿನ ಸಮಸ್ತ ಜನತೆಯ ಶ್ರಮದಿಂದ ದೇವಸ್ಥಾನದ ನಿರ್ಮಾಣವಾಯಿತು.
0 Comments
Post a Comment